ರೈತ ಮಿತ್ರರೇ ನೀವು ನಿಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕು ಅಥವಾ ಹೊಸದಾಗಿ ಉದ್ಯೋಗ ಮಾಡಬೇಕು ಎಂದುಕೊಳ್ಳುತ್ತಿದ್ದವರಿಗೆ ಒಂದು ಸುವರ್ಣ ಅವಕಾಶ ಬಂದಿದೆ ಸುವರ್ಣ ಅವಕಾಶ ಈಗಾಗಲೇ ಬಹುದಿನಗಳಿಂದ ಇದೆ ಆದರೆ ಅದನ್ನು ರೈತರು ಬಳಕೆ ಮಾಡುತ್ತಿಲ್ಲ ಹೀಗಾಗಿ ಕೇಂದ್ರ ಸರ್ಕಾರದ ಕೆಲವೊಂದು ಯೋಜನೆಗಳು ಉಪಯೋಗವಾಗುತ್ತಿಲ್ಲ ಆದರೆ ನೀವು ಕೆಲವು ಪ್ರಯತ್ನಗಳನ್ನಾಗಿ ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು.
ಯಾವ ಯೋಜನೆ ಏನು? ಸಹಾಯಧನ?
ರಾಷ್ಟ್ರೀಯ ಪಶು ಮಿಷನ್ ಈ ಯೋಜನೆ ಬಗ್ಗೆ ಸಾಕಷ್ಟು ಜನರಿಗೆ ಇನ್ನೂ ಮಾಹಿತಿ ಇಲ್ಲ ರೈತರು ಅಂದರೆ ಭಾರತದಲ್ಲಿ ಹೈನುಗಾರಿಕೆ ಅಥವಾ ಪ್ರಾಣಿಗಳನ್ನು ವೃದ್ಧನೆ ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ ವಿಶ್ವದಲ್ಲಿ ಅತಿ ಹೆಚ್ಚು ನಾವು ಹಾಲು ಉತ್ಪಾದನೆಯಲ್ಲಿ ಮುಂದುವರಿಯಬೇಕು ಮತ್ತು ರೈತರು ತಮ್ಮ ಆದಾಯವನ್ನು ತಾವೇ ಹೆಚ್ಚು ಸೃಷ್ಟಿ ಮಾಡಬೇಕು ಮತ್ತು ನಮ್ಮ ಭಾರತದ ಒಟ್ಟಾರೆಯಾದ ಆದಾಯವನ್ನು ಹೆಚ್ಚಿಸಬೇಕು ಈ ಒಂದು ದೃಷ್ಟಿಕೋನದಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿತ್ತು ಮತ್ತು ಇದರ ಕೆಲವೊಂದು ಉದ್ದೇಶಗಳು ಈ ಕೆಳಗಿನಂತಿವೆ.
1) ಪ್ರತಿಯೊಬ್ಬ ಭಾರತದಲ್ಲಿ ಇರುವ ರೈತರು ತಮ್ಮ ಕಾಲು ಮೇಲೆ ತಾವು ನಿಂತುಕೊಳ್ಳಬೇಕು.
2) ನಮ್ಮ ರೈತರ ಹಾಗೂ ದೇಶದ ಒಟ್ಟಾರೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಆಗಬೇಕು.
3) ತಾವು ಬೆಳೆಯುವ ಉತ್ಪನ್ನಗಳನ್ನು ಅದಕ್ಕೆ ಆಹಾರವನ್ನಾಗಿ ಕೊಟ್ಟು ಅದರಿಂದ ಆದಾಯ ಅಂದರೆ ಪ್ರಾಣಿ ಪಕ್ಷಿಗಳಿಂದ ಬರುವ ಆಹಾರ ಮತ್ತು ಮಾಂಸವನ್ನು ಬಳಸಿಕೊಂಡು ಹೆಚ್ಚು ಆದಾಯ ಪಡೆಯಬೇಕು.
4) ಕಡಿಮೆ ಹೂಡಿಕೆ ಮಾಡಿ ಹೆಚ್ಚಿಗೆ ಲಾಭ ಪಡೆದುಕೊಳ್ಳುವ ಒಟ್ಟಾರೆ ಇದರ ಉದ್ದೇಶವಾಗಿದೆ.
ಯೋಜನೆಯ ಮೂಲ ಉದ್ದೇಶದ ಗುರಿ?
ಒಟ್ಟಾರೆಯಾಗಿ ಕ್ವಾಲಿಟಿ ಮತ್ತು ಕ್ವಾಂಟಿಟಿ ಹೆಚ್ಚಳ ಮಾಡುವ ಉದ್ದೇಶ ಈ ಯೋಜನೆಯದಾಗಿದೆ, ಈ ಒಂದು ಯೋಜನೆಯಲ್ಲಿ ಸಿಗುವಷ್ಟು ಲಾಭವು ಬೇರೆ ಯಾವುದೇ ಯೋಜನೆಯಲ್ಲಿ ಸಿಗುವುದಿಲ್ಲ ಮತ್ತು ಸಿಕ್ಕರೂ ಕೂಡ ಪಶು ಇಲಾಖೆಯಲ್ಲಿ ದೊರೆಯುವ ಯಾವುದೇ ಸೌಲಭ್ಯಕ್ಕಿಂತ ಕೇಂದ್ರದ ಈ ಯೋಜನೆಯಲ್ಲಿ ಸಿಗುವಷ್ಟು ಸಹಾಯಧನ ಯಾವುದೇ ಯೋಜನೆಯಲ್ಲಿಯೂ ದೊರೆಯುವುದಿಲ್ಲ.
ಈ ಯೋಜನೆಯಲ್ಲಿ ಯಾವುದಕ್ಕೆ ಯಾವುದಕ್ಕೆ ಸಾಲ ಸೌಲಭ್ಯ ದೊರೆಯಿತು?
1) ಕುರಿ ಸಾಕಾಣಿಕೆ
2) ಆಡು ಸಾಕಾಣಿಕೆ
3) ಹಂದಿ ಸಾಕಾಣಿಕೆ
4) ಕೋಳಿ ಸಾಕಾಣಿಕೆ
ಮೇಲೆ ನೀಡಿರುವ ನಾಲ್ಕರಲ್ಲೇ ಯಾವುದಾದರೂ ಒಂದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಎಲ್ಲವೂದಕ್ಕೆ ಸಹಾಯಧನ ಪಡೆಯಲು ಸಾಧ್ಯವಿಲ್ಲ ಈ ಯೋಜನೆಯಲ್ಲಿ ಗರಿಷ್ಠ 50 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀವು ಪಡೆದುಕೊಳ್ಳಬಹುದು ಮತ್ತು ಅದಕ್ಕೆ ಸಹಾಯಧನವು ಸಹ ಇರುತ್ತದೆ ನೀವು ಒಟ್ಟಾರೆ 50 ಲಕ್ಷದಲ್ಲಿ ಸಹಾಯಧನದೊಂದಿಗೆ ಸೇರಿ 50 ಲಕ್ಷ ಗರಿಷ್ಠ ಹಣವನ್ನು ನೀಡಲಾಗುತ್ತದೆ ಮತ್ತು ಮೇಲೆ ಯಾವುದಾದರೂ ಒಂದನ್ನು ನೀವು ಅಭಿವೃದ್ದಿ ಪಡಿಸಲು ಮುಂದಾದರೆ ಸರ್ಕಾರ ನಿಮ್ಮೊಂದಿಗೆ ಕೈಜೋಡಿಸಲಿದೆ.
ಕೇವಲ ಪಶು ಸಾಕಾಣಿಕೆ ಬಿಟ್ಟು ಬೇರೆ ಏನೆಲ್ಲಾ ಈ ಯೋಜನೆಯಲ್ಲಿ ಮಾಡಬಹುದು?
1) ಪಶು ಸಂಗೋಪನೆಯನ್ನು ಇದರಲ್ಲಿ ಮಾಡಬಹುದು.
2) ಪಶು ಸಂಗೋಪನೆಯಲ್ಲಿ ಆಹಾರ ಮತ್ತು ಮೇವನ್ನು ತಯಾರಿಕೆ ಮಾಡಬಹುದು.
3) ದೇಶದಲ್ಲಿ ಹಂದಿ ಸಾಕಾಣಿಕೆಯನ್ನು ಉತ್ತೇಜನ ಮಾಡುವುದು.
4) ಇದೇ ರೀತಿಯಾಗಿ ಜ್ಞಾನವನ್ನು ಅಭಿವೃದ್ಧಿಗೊಳಿಸುವುದು ಮತ್ತು ಇತರರಿಗೂ ಇಂತಹ ಸಲಹೆಗಳನ್ನು ಬೇರೆಯವರಿಗೆ ತಿಳುವಳಿಕೆ ನೀಡುವುದು.
ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳುವುದು ಹೇಗೆ?
ಈ ಲೇಖನದ ಮುಖ್ಯಘಟ್ಟ ಇದೆ ಆಗಿರುತ್ತದೆ ಮತ್ತು ಇದರ ಲಾಭ ಮತ್ತು ಸಹಾಯಧನ ಪಡೆದುವುದು ಹೇಗೆ ಎಲ್ಲವೂ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು. ಇದಕ್ಕಾಗಿ ನೀವು ಮೊಟ್ಟಮೊದಲಿಗೆ ಯಾವ ಪಶು ಸಂಗೋಪನೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲಿ ಕುರಿ ಸಾಕಾಣಿಕೆ ಅಥವಾ ಆಡು ಸಾಕಾಣಿಕೆ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.
1)ಕುರಿ ಸಾಕಾಣಿಕೆ :-
ಮೊಟ್ಟ ಮೊದಲಿಗೆ ಇದರದೇ ಆದ ನೀವು ಒಂದು ಪ್ರಾಜೆಕ್ಟ್ ರಿಪೋರ್ಟ್ ರೆಡಿ ಮಾಡಬೇಕಾಗಿರುತ್ತದೆ ಇದನ್ನು ನೀವು ಎನ್ಎಲ್ಎಂ ನ್ಯಾಷನಲ್ ಲೈಫ್ ಸ್ಟಾಕ್ ಮಿಷನ್ ವೆಬ್ಸೈಟ್ನಲ್ಲಿ ಹೋಗಿ ಚೆಕ್ ಮಾಡಬಹುದು. ಅಥವಾ ನೀವು ಯಾವುದಾದರೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿಕೊಂಡು ಪ್ರೊಜೆಕ್ಟ್ ರಿಪೋರ್ಟ್ ಯಾವ ರೀತಿ ರೆಡಿ ಮಾಡಬೇಕು ಅದನ್ನು ನೀವು ಗಮನಿಸಿ ಸರಿಯಾದ ಮಾಹಿತಿಯೊಂದಿಗೆ ನಿಮ್ಮ ಕೆಪ್ಯಾಸಿಟಿಗೆ ಅನುಗುಣವಾಗಿ ಅಂದರೆ ನಿಮ್ಮ ಸಾಮರ್ಥ್ಯದ ಅನುಗುಣವಾಗಿ ಎಷ್ಟು ನೀವು ಹೂಡಿಕೆ ಮಾಡಬಹುದು ಮತ್ತು ಅದರಿಂದ ಸಂಪೂರ್ಣ ಪ್ರಾಜೆಕ್ಟ್ ರಿಪೋರ್ಟ್ ನೀವು ರೆಡಿ ಮಾಡಬೇಕಾಗುತ್ತದೆ.
2)ಆಡು ಸಾಕಾಣಿಕೆ:-
ಕುರಿ ಸಾಕಾಣಿಕೆಯಂತೆ ಆಡು ಸಾಕಾಣಿಕೆಯು ಕೂಡ ರೈತರು ಮಾಡಬಹುದು, ಹಾಡು ಸಾಕಾಣಿಕೆ ಸ್ವಲ್ಪ ಕುರಿ ಸಾಕಾಣಿಗಿಂತ ಭಿನ್ನವಾಗಿರುತ್ತದೆ ಏಕೆಂದರೆ ಉರಿ ಸಾಕಾಣಿಕೆಯಲ್ಲಿ ಸ್ವಲ್ಪ ಕುರಿಗಳು ವಿವಿಧ ವಾತಾವರಣಕ್ಕೆ ಸೆಟ್ ಆಗುತ್ತದೆ ಆದರೆ ಆಡು ಬೇರೆ ಬೇರೆ ವಾತಾವರಣಕ್ಕೆ ಸೆಟ್ ಆಗುವುದಿಲ್ಲ ಇಂತಹ ಸಮಯದಲ್ಲಿ ನೀವು ಕುರಿ ಸಾಕಾಣಿಕೆ ಮಾಡುವುದು ತುಂಬಾ ಒಳ್ಳೆಯದು. ಇದಕ್ಕೂ ಕೂಡ ಮೇಲೆ ತಿಳಿಸಿದಂತೆ ಪ್ರಾಜೆಕ್ಟ್ ರಿಪೋರ್ಟ್ ರೆಡಿ ಮಾಡಿಕೊಳ್ಳಬೇಕು. ಪ್ರೊಜೆಕ್ಟ ರಿಪೋರ್ಟ್ ಸಹಾಯದಿಂದ ನೀವು ಲೋನ್ ಪಡೆಯಬಹುದು.
ಸಹಾಯಧನ ನೀಡುವ ವಿಧಾನ ಹೇಗಿರುತ್ತದೆ?
ಇದನ್ನು ನೀವು ತಿಳಿದುಕೊಳ್ಳಬೇಕಾದರೆ ಮೊಟ್ಟ ಮೊದಲಿಗೆ ನೀವು ಇದನ್ನು ವೆಬ್ಸೈಟ್ ಮೂಲಕ ಭೇಟಿ ನೀಡಿ ಸರಿಯಾಗಿ ನೋಡಿಕೊಳ್ಳಬೇಕು ಮತ್ತು ಇದನ್ನು ಅಪ್ಲೈ ಮಾಡುವುದು ಹೇಗೆ ಹಲವಾರು ವಿಧಾನಗಳ ಮೂಲಕ ನಾವು ಇದನ್ನು ಅಪ್ಲೈ ಮಾಡುತ್ತೇವೆ ಮೊಟ್ಟಮೊದಲಿಗೆ ಆನ್ಲೈನ್ ನಲ್ಲಿ ರಿಜಿಸ್ಟ್ರೇಷನ್ ಮಾಡಬೇಕು ನಂತರ ದಾಖಲೆ ವಿವರಗಳನ್ನು ತುಂಬಬೇಕು ಇದಾದ ನಂತರ ನೀವು ನಿಮ್ಮ ಪ್ರಾಜೆಕ್ಟ್ ರಿಪೋರ್ಟ್ ಅಪ್ಲೋಡ್ ಮಾಡಬೇಕು ಮತ್ತು ಅದನ್ನು ವೇರಿಫೈ ಮಾಡಬೇಕು.
ಯೋಜನೆ ಸೌಲಭ್ಯ ಪಡೆಯುವವರ ಅರ್ಹತೆ ಏನು?
ಮೊಟ್ಟಮೊದಲಿಗೆ ಈ ಸೌಲಭ್ಯದ ಲಾಭವನ್ನು ಪಡೆಯಬೇಕಾದರೆ ನೀವು ಭಾರತೀಯವರಾಗಿರಬೇಕು ಕನಿಷ್ಠ 18 ವಯಸ್ಸಿಗಿಂತ ಹೆಚ್ಚಾಗಿರಬೇಕು ಇದಲ್ಲದೆ ನೀವು ಪ್ರಾಜೆಕ್ಟ್ ರಿಪೋರ್ಟ್ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಇನ್ನಿತರ ದಾಖಲೆಗಳು ಕಡ್ಡಾಯವಾಗಿ ನಿಮ್ಮೊಂದಿಗೆ ಇರಬೇಕು ಈ ಎಲ್ಲ ದಾಖಲೆಗಳೊಂದಿಗೆ ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ನಲ್ಲಿ ಇದಕ್ಕೆ ಅಪ್ಲೈ ಮಾಡಬಹುದು.
ಸಹಾಯಧನದ ಪಡೆಯಲು ಸಂಪರ್ಕಿಸಬೇಕಾದ ವಿಳಾಸ?
ಈ ಯೋಜನೆ ಸೌಲಭ್ಯ ಪಡೆಯಬೇಕಾದರೆ ನೀವು ನಿಮ್ಮ ಪಶು ಇಲಾಖೆಯನ್ನು ಭೇಟಿ ನೀಡಬಹುದು ಅಥವಾ ನೀವು ನಿಮ್ಮ ಹತ್ತಿರದ ಪಶು ವೈದ್ಯಕೀಯ ಆಸ್ಪತ್ರೆಯನ್ನು ಭೇಟಿ ನೀಡಬಹುದು ಅಥವಾ ನೀವು ನೇರವಾಗಿ ನಿಮ್ಮ ಮೊಬೈಲ್ ನಲ್ಲಿ ನ್ಯಾಷನಲ್ ಲೈವ್ ಸ್ಟಾಕ್ ಮಿಷನ್ ಎಂದು ಸರ್ಚ್ ಮಾಡಿ ಅದರ ಬಗ್ಗೆ ಮಾಹಿತಿಯನ್ನು ಹುಡುಕಿ ನೀವು ಸಂಪರ್ಕಿಸುವ ವಿಳಾಸವನ್ನು ಪಡೆಯಬಹುದು.
ಇಂತಹ ಯೋಜನೆಯನ್ನು ನೀವು ಲಾಭವನ್ನು ಪಡೆದುಕೊಳ್ಳಬೇಕು ಮತ್ತು ಸರ್ಕಾರದಿಂದ ಸಿಗುವ ಹೊಸ ಹೊಸ ಸೌಲಭ್ಯಗಳನ್ನು ನೀವು ಪಡೆದುಕೊಳ್ಳುವುದರಿಂದ ನಿಮ್ಮ ಹೆಚ್ಚಿನ ಆದಾಯವನ್ನು ಗಳಿಸಬಹುದು ಮತ್ತು ನೀವು ನಿಮ್ಮ ಗುರಿಯನ್ನು ಬೇಗನೆ ಸಾಧಿಸಲು ಇಂತಹ ಯೋಜನೆಗಳು ತುಂಬಾ ಸಹಾಯಕಾರಿಯಾಗಿರುತ್ತದೆ ರೈತರಿಗೆ ಹೂಡಿಕೆ ಮಾಡಲು ಹಣವಿರುವುದಿಲ್ಲ ನೀವು ಸಾಧಿಸಬಹುದಾದ ಛಲ ಇರುತ್ತದೆ ಆದರೆ ಹೂಡಿಕೆಗೆ ಹಣ ಇರುವುದಿಲ್ಲ ಇಂತಹ ಯೋಜನೆಗಳನ್ನು ಬಳಸಿಕೊಂಡು ಹೂಡಿಕೆ ಮಾಡಿ ನೀವು ಯಶಸ್ ಕಾಣಬಹುದು.